For Enquiries Contact us
ಶ್ರೀ ಈಶ್ವರಪ್ಪ .ಬಿ
ಅಧ್ಯಕ್ಷರು
ಕೇಂದ್ರ ಸಂಘವನ್ನು 1928ರಲ್ಲಿ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಹಿಂದಿನ ಗಣ್ಯರು ಸ್ಥಾಪಿಸಿದರು.
ಹೆಚ್ಚಿನ ಶಿಕ್ಷಣಕ್ಕಾಗಿ ಸಮಾಜದ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದು ವ್ಯಾಸಂಗ ಮಾಡಬೇಕಾದ ಪರಿಸ್ಥಿತಿ ಇದ್ದುದರಿಂದ ಬೆಂಗಳೂರು ನಗರದಲ್ಲಿ ವಿದ್ಯಾರ್ಥಿ ನಿಲಯದ ಅವಶ್ಯಕತೆಯನ್ನು ಮನಗಂಡು ಹಾಲಿ ಕೇಂದ್ರ ಸಂಘದ ಕಟ್ಟಡವನ್ನು ವಿದ್ಯಾರ್ಥಿ ನಿಲಯ ನಡೆಸಲು 1938ರಲ್ಲಿ ದಿ|| ಸಾಕಮ್ಮನವರು ಕೇಂದ್ರ ಸಂಘಕ್ಕೆ ದಾನವಾಗಿ ನೀಡಿದರು. ಈ ರೀತಿಯ ಕಾರ್ಯಕ್ರಮಕ್ಕೆ ಕಾರಣವೇನೆಂದರೆ ಶಿಕ್ಷಣದಿಂದ ಸಮಾಜದ ಪ್ರಗತಿ ಸಾಧ್ಯವೆಂಬುದನ್ನು ಅವರು ಅರಿತಿದ್ದರು. ಅಲ್ಲಿಂದ ಇಲ್ಲಿಯವರೆವಿಗೂ ಸಮಾಜದ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿ ಸೌಲಭ್ಯವನ್ನು ಪಡೆದು ಅವರುಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವುದಲ್ಲದೆ ಆ ವಿದ್ಯಾರ್ಥಿಗಳ ಕುಟುಂಬಗಳು ಸಹ ಆರ್ಥಿಕವಾಗಿ ಸದೃಢರಾಗಿರುವುದು ಕಂಡು ಬಂದಿರುತ್ತದೆ. ಈ ಪ್ರಗತಿಗೆ ಶಿಕ್ಷಣವೇ ಮೂಲ ಕಾರಣ.
ಸಮಾಜದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸಂಘವು ಸದಾ ಶ್ರಮಿಸುತ್ತಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸಂಘದ ಹಿಂದಿನ ಮತ್ತು ಇಂದಿನ ಅಧ್ಯಕ್ಷರುಗಳು, ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಸೇವೆ ಗಣನೀಯವಾಗಿದೆ. ಸಮಾಜವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡಯ್ಯಲು ಸಂಘವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯೋನ್ಮುಖವಾಗಿದೆ.
For Enquiries Contact us