Kuruhina Setty Kendra Sanga was established in 1928 in Bangalore by Smt. Sakamma to bring together the people who belong to Kuruhina Setty community to one family . Many committed people served this sanga as presudents, secretaries, treasurers voluntarily for the upliftment of the Kuruhina Setty community. Moreover,with the kind support and help of dedicated and faithful executive commitee and young people as its members the sanga is growing day by day in oneness and faithfullness.
ಕುರುಹಿನಶೆಟ್ಟಿ ಸಮಾಜದ ಒಗ್ಗಟ್ಟನ್ನು ವಿಶಾಲ ತಳಹದಿಯ ಮೇಲೆ ಅಂದರೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಉತ್ತಮ ರೀತಿಯಲ್ಲಿ ಬಲಿಷ್ಠ ಪಡಿಸಬೇಕಾಗಿದೆ. ಆದರೆ ಈ ನಿಟ್ಟಿನಲ್ಲಿ ಬಲಿಷ್ಠ ಪಡಿಸಬೇಕಾಗಿರುವುದು ರಾಜ್ಯದ ಕೆಲವೊಂದು ಪ್ರದೇಶಗಳಲ್ಲಿ ಸಮಾಜದವರು ಹಲವು ಹೆಸರುಗಳಿಂದ ಜಾತಿಯನ್ನು ಗುರುತಿಸಿ ಕೊಂಡಿರುವುದು ಮೂಲ ಕಾರಣವಾಗಿದೆ. ಆದುದರಿಂದ ಈ ಜಾತಿಗಳನ್ನು ಬದಿಗೊತ್ತಿ 66 ಗೋತ್ರಗಳಲ್ಲಿ ಗುರುತಿಸಿ ಕೊಂಡಿರುವವರೆಲ್ಲರೂ "ಕುರುಹಿನ ಶೆಟ್ಟಿ" ಎಂಬ ಒಂದೇ ಹೆಸರಿನಿಂದ ಘೋಷಿಸಿಕೊಂಡು ಚಾಲನೆಗೆ ಬರುವಂತೆ ಮಾಡಬೇಕಾಗಿದೆ. ಇದರ ಮೂಲಕ "ಕುರುಹಿನ ಶೆಟ್ಟಿ" ಸಮಾಜದ ಸಮಗ್ರತೆಯನ್ನು ಬಲಿಷ್ಠಗೊಳಿಸಲು ಸಮಾಜದವರೆಲ್ಲರ ಸಹಕಾರವನ್ನು ಕೇಂದ್ರ ಸಂಘವು ಕೋರುತ್ತದೆ