For Enquiries Contact us
ಶ್ರೀ ಎಂ. ಎಸ್. ಗೋಪಾಲಕೃಷ್ಣ
ಪ್ರಧಾನ ಕಾರ್ಯದರ್ಶಿಗಳು
ಕುರುಹಿನಶೆಟ್ಟಿ ಕೇಂದ್ರ ಸಂಘ (ರಿ)
ಕುರುಹಿನಶೆಟ್ಟಿ ಜನಾಂಗದ ಒಗ್ಗಟ್ಟನ್ನು ವಿಶಾಲ ತಳಹದಿಯ ಮೇಲೆ ಅಂದರೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಉತ್ತಮ ರೀತಿಯಲ್ಲಿ ಬಲಿಷ್ಠ ಪಡಿಸಲು ತೊಡಕಾಗಿರುವುದು ರಾಜ್ಯದ ಕೆಲವೊಂದು ಪ್ರದೇಶಗಳಲ್ಲಿ ಸಮಾಜದವರು ಹಲವು ಹೆಸರುಗಳಿಂದ ಜಾತಿಯನ್ನು ಗುರುತಿಸಿ ಕೊಂಡಿರುವವರೆಲ್ಲರೂ "ಕುರುಹಿನಶೆಟ್ಟಿ" ಎಂಬ ಒಂದೇ ಹೆಸರಿನಿಂದ ಘೋಷಿಸಿಕೊಂಡು ಚಾಲನೆಗೆ ಬರುವಂತೆ ಮಾಡಬೇಕಾಗಿದೆ. ಇದರ ಮೂಲಕ "ಕುರುಹಿನಶೆಟ್ಟಿ" ಸಮಾಜದ ಸಮಗ್ರತೆಯನ್ನು ಬಲಿಷ್ಟಗೊಳಿಸಲು ಜನಾಂಗದವರೆಲ್ಲರ ಸಹಕಾರವನ್ನು ಕೇಂದ್ರ ಸಂಘವು ಕೋರುತ್ತದೆ.
ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಏಪ್ರಿಲ್ - 2015 ಮಾಹೆಯಲ್ಲಿ ಜಾತಿಗಳ ಜನಗಣತಿ ಅಂಗವಾಗಿ ಎಲ್ಲಾ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ರಾಜ್ಯದಾದ್ಯಂತ ನಡೆಸಲು ಹಮ್ಮಿಕೊಂಡಿದೆ. ಈ ಸಮೀಕ್ಷೆ ಸಮಯದಲ್ಲಿ ನಮ್ಮ ಸಮಾಜದವರು ಅಗತ್ಯ ಮಾಹಿತಿಗಳನ್ನು ಗಣತಿದಾರರಿಗೆ ಒದಗಿಸಿ ಕೊಡುವುದಲ್ಲದೆ " ಧರ್ಮ, ಜಾತಿ " ಹೆಸರುಗಳನ್ನು ಸಂಕೇತ ಸಂಖ್ಯೆಗಳ ಮೂಲಕ ನಮೂದಿಸಿ ಕೊಳ್ಳಬೇಕಾಗಿರುತ್ತದೆ. ಅಲ್ಲದೆ ನಮೂನೆಯ ಸಂಬಂದಿಸಿದ ಇತರ ಕೆಲವು ಕಾಲಂಗಳಲ್ಲಿ ಸ್ಪಷ್ಟವಾದ ಮಾಹಿತಿಗಳನ್ನು ಗಣತಿದಾರರಿಗೆ ಒದಗಿಸಿ ಕೊಡಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ಹಲವು ಹೆಸರುಗಳಿಂದ ಅಂದರೆ ಕಾಲಂ ನಂ .6ರ ಜಾತಿ ಕಾಲಂನಲ್ಲಿ ನಮ್ಮ ಜಾತಿಯನ್ನು "ಕುರುಹಿನಶೆಟ್ಟಿ " ಎಂದು ನಮೂದು ಮಾಡಿಸಿಕೊಂಡು, ಜಾತಿಗೆ ನೀಡಿರುವ ಸಂಕೇತ ಸಂಖ್ಯೆ 0719 ಅನ್ನು ನಮೂದಿಸಿ ಕಾಲಂ 26 ಮತ್ತು 27ರಲ್ಲಿ ಕೆಳಕಂಡಂತೆ ಮಾಹಿತಿಗಳನ್ನು ಒದಗಿಸಿ ಕೊಡುವಂತೆ ಕೋರಲಾಗಿದೆ,
ಕಾಲಂ ಸಂಖ್ಯೆ - 5
|
ಕಾಲಂ ಸಂಖ್ಯೆ - 6
|
ಕಾಲಂ ಸಂಖ್ಯೆ - 26
|
ಕಾಲಂ ಸಂಖ್ಯೆ - 27
|
|||
---|---|---|---|---|---|---|
ಧರ್ಮ
|
ಸಂಕೇತ ಸಂಖ್ಯೆ
|
ಜಾತಿ
|
ಸಂಕೇತ ಸಂಖ್ಯೆ
|
ನೀವು ತೊಡಗಿರುವ ಹಾಲಿ ಉದ್ಯೋಗ
|
ಕುಲಕಸುಬು ಯಾವುದು
|
ಸಂಕೇತ ಸಂಖ್ಯೆ
|
ಹಿಂದು
|
01
|
ಕುರುಹಿನಶೆಟ್ಟಿ
|
719
|
ನೇಕಾರಿಕೆ ಅಥವಾ ಇತರೆ ಉದ್ಯೋಗ ಅಥವಾ ವ್ಯಾಪಾರದ ಬಗ್ಗೆ ತಿಳಿಸುವುದು
|
ನೇಕಾರರು (ರೇಷ್ಮೆ / ಹತ್ತಿ)
|
77
|
ಈ ಮೇಲಿನ ಮಾಹಿತಿಗಳನ್ನು ಚಾಚು ತಪ್ಪದೆ ಗಣತಿದಾರರಿಗೆ ಒದಗಿಸಿ ಕೊಟ್ಟು ನಮೂನೆಯಲ್ಲಿ ದಾಖಲಿಸಿ ದೃಢೀಕರಿಸಕೊಳ್ಳತಕ್ಕದ್ದು.
For Enquiries Contact us