ವಿದ್ಯಾರ್ಥಿ ನಿಲಯ

ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇರಲಿಲ್ಲ. ಧಾನಿಗಳ ಹಣ ಸಹಾಯದಿಂದ ಬಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ(ಸೋಲಾರ್ ಅಳವಡಿಸಲಾಗಿದೆ).

2013 - 2014ನೇ ಸಾಲಿನ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳ ಹೆಚ್ಚಾಗಿ ಸ್ಥಳದ ಅಭಾವ ಉಂಟಾದ ಕಾರಣ ಖಾಲಿ ಜಾಗದಲ್ಲಿ 30x18ರಷ್ಟು ಕಟ್ಟಡವನ್ನು ನಿರ್ಮಿಸಿ ಸುಮಾರು 10 ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಸಿಕೊಡಲಾಗಿದೆ.

ಧಾನಿಗಳಿಂದ ಹಣ ಸಹಾಯ ಪಡೆದು 8 ಅಟ್ಟದ 12 ಮಂಚಗಳನ್ನು ಖರೀದಿಸಿ 24 ವಿದ್ಯಾರ್ಥಿಗಳಿಗೆ ವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಜನಾಂಗದ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯದ ವಿಚಾರವಾಗಿ ಕೋರಿಕೆ ಬಂದು ಬೇರೆ ಸಮುದಾಯದ ಹಾಸ್ಟೆಲ್ ನಲ್ಲಿ ವಸತಿ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಬೇರೆ ಸ್ಥಳಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಬಡ ಕುಟುಂಬದ ವಿದ್ಯಾರ್ಥಿನಿಯರಿಗೆ ಸಂಘದ ಆರ್ಥಿಕ ನೆರವನ್ನು ನೀಡಲು ಯೋಜನೆಯನ್ನು ಹಮ್ಮಿಕೊಳ್ಳಲು ಸಂಘವು ಉದ್ದೇಶಿಸಿದೆ.


ಕಲ್ಯಾಣ ಮಂಟಪ

  • ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಶೌಚಲಯ ಮತ್ತು ಸ್ಥಾನದ ಗೃಹಗಳನ್ನು ನಿರ್ಮಿಸಲಾಗಿದೆ.
  • ಅಡುಗೆ ಮನೆಗೆ ಸಾದರ ಹಳ್ಳಿ ಕಲ್ಲಿನ ವ್ಯವಸ್ಥೆಯನ್ನು ಮಾಡಲಾಗಿದೆ.
  • ಮುಖ್ಯ ಊಟದ ಅಂಗಳದಲ್ಲಿ ಫಾಲ್ಸ್ ಸೀಲಿಂಗ್ ಮತ್ತು ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಆಡಳಿತ ಕಛೇರಿಯ ಆಧುನೀಕರಣ

ಕಛೇರಿಗೆ ಕಂಪ್ಯೂಟರ್, ಪ್ರಿಂಟರ್ ಮತ್ತು ಪೀಠೋಪಕರಣಗಳನ್ನು ಅಳವಡಿಸಿ ಸಂಘದ ಮಾಹಿತಿಗಾಗಿ ವೆಬ್ ಸೈಟ್ ಸೌಲಭ್ಯವನ್ನು ಅಳವಡಿಸಲಾಗಿದೆ