ಸುಮಾರು 60 ವರ್ಷದಿಂದ ವ್ಯವಸಾಯಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದ ಸುಮಾರು 10 ಎಕರೆಯಷ್ಟು ವಿಸ್ತೀರ್ಣವಿದ್ದು ಇದರಲ್ಲಿ 5 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿತ್ತು. 3 ಬಾವಿಗಳಲ್ಲಿ ನೀರು ಬಾರದೆ ನಷ್ಟ ಉಂಟಾಯಿತು ಇನ್ನುಳಿದ 2 ಬಾವಿಗಳಲ್ಲಿ ನೀರು ಬಂದಿದ್ದು ಅದರಲ್ಲಿ ಸುಮಾರು 2 ಎಕರೆಗಳಲ್ಲಿ ಕಬ್ಬಿನ ವ್ಯವಸಾಯ ಮಾಡಲಾಗಿದೆ. ಈ 10 ಎಕರೆ ಜಮೀನನ್ನು ವ್ಯವಸಾಯ ಮಾಡಲು ಸಮತಟ್ಟು ಬದುಗಳನ್ನು ಹಾಕಿಸಲಾಗಿದೆ. ಪಂಪ್ ಹೌಸ್ ನಿರ್ಮಾಣ, 2 ಬೋರ್ ವಲ್ ಪಂಪ್ ಮೋಟಾರುಗಳನ್ನು ಅಳವಡಿಸಲಾಗಿದ್ದು ಸುಮಾರು 8 ಎಕರೆ ಪ್ರದೇಶಕ್ಕೆ ನೀರಿನ ಸೌಲಭ್ಯ ಒದಗಿಸಲು ಪೈಪುಗಳ ಅಳವಡಿಕೆ ಮಾಡಲಾಗಿದೆ.
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸುಮಾರು 22 ಎಕರೆ ಜಮೀನು ಡಾಣನಹಳ್ಳಿಯಲ್ಲಿದ್ದು ಯಾವ ಉತ್ಪತ್ತಿಯು ಬರುತ್ತಿರಲಿಲ್ಲ. ಇತ್ತೀಚೆಗೆ 4 ವರ್ಷದಿಂದ ಕೋರ್ಟಿನಲ್ಲಿದ್ದು ಈಗ ಸಂಪೂರ್ಣ ಸಂಘದ ಸ್ವಾಧೀನಕ್ಕೆ ಪಡೆದು ಜನವರಿ 2015 ರಿಂದ ಸಂಘಕ್ಕೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಈ ಎರಡೂ ಜಮೀನುಗಳಿಂದ ಈ ವರ್ಷ ಒಟ್ಟು ಅಂದಾಜು 2 ಲಕ್ಷ ರೂಗಳ ಆದಾಯವನ್ನು ನಿರೀಕ್ಕಿಸಲಾಗಿದೆ.
ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇರಲಿಲ್ಲ. ಧಾನಿಗಳ ಹಣ ಸಹಾಯದಿಂದ ಬಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ(ಸೋಲಾರ್ ಅಳವಡಿಸಲಾಗಿದೆ).
2013 - 2014ನೇ ಸಾಲಿನ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳ ಹೆಚ್ಚಾಗಿ ಸ್ಥಳದ ಅಭಾವ ಉಂಟಾದ ಕಾರಣ ಖಾಲಿ ಜಾಗದಲ್ಲಿ 30x18ರಷ್ಟು ಕಟ್ಟಡವನ್ನು ನಿರ್ಮಿಸಿ ಸುಮಾರು 10 ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಸಿಕೊಡಲಾಗಿದೆ.
ಧಾನಿಗಳಿಂದ ಹಣ ಸಹಾಯ ಪಡೆದು 8 ಅಟ್ಟದ 12 ಮಂಚಗಳನ್ನು ಖರೀದಿಸಿ 24 ವಿದ್ಯಾರ್ಥಿಗಳಿಗೆ ವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಜನಾಂಗದ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯದ ವಿಚಾರವಾಗಿ ಕೋರಿಕೆ ಬಂದು ಬೇರೆ ಸಮುದಾಯದ ಹಾಸ್ಟೆಲ್ ನಲ್ಲಿ ವಸತಿ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಬೇರೆ ಸ್ಥಳಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಬಡ ಕುಟುಂಬದ ವಿದ್ಯಾರ್ಥಿನಿಯರಿಗೆ ಸಂಘದ ಆರ್ಥಿಕ ನೆರವನ್ನು ನೀಡಲು ಯೋಜನೆಯನ್ನು ಹಮ್ಮಿಕೊಳ್ಳಲು ಸಂಘವು ಉದ್ದೇಶಿಸಿದೆ.
ಸಮಾಜದ ಸಂಘಟನೆಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮೊದಲ ಹಂತದಲ್ಲಿ ಬೆಳಗಾವಿ ವಿಭಾಗದ ಬೆಟಗೇರಿ ಮತ್ತು ಗುಲ್ಬರ್ಗಾ ವಿಭಾಗದ ಭಾಗ್ಯನಗರದಲ್ಲಿ ಸಮಲೋಚನೆ ಸಭೆ ನಡೆಸಿ ಸಮಾಜದ ಅಭಿವೃದ್ಧಿಗಾಗಿ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ. ಇದೇ ಸಮಯದಲ್ಲಿ ಕೇಂದ್ರ ಸಂಘದ ವತಿಯಿಂದ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯವನ್ನು ವಿತರಿಸಲಾಗಿದೆ.
ಸಂಘಟನಾ ಕಾರ್ಯಕ್ರಮವನ್ನು ಮಹಾರಾಷ್ಟ್ರದ ಸೊಲ್ಪಪುರದ ನಾಲ್ಕು ಪಂಗಡ (ಕೊರ್ನಿ ಕೋಷ್ಠಿ ಜಾಣರ ಮತ್ತು ನೀಲಕಂಠ) ಎಂಬ ಹೆಸರಿನಿಂದ ಗುರುತಿಸಿಕೊಂಡವರೆಲ್ಲರನ್ನು ಒಗ್ಗೂಡಿಸಿ ಕುರುಹಿನಶೆಟ್ಟಿ ಎಂದು ಗುರುತಿಸಿಕೊಳ್ಳಲು ಚಿಂತನ ಮಂತನ ಸಭೆಯನ್ನು ನಡೆಸಲಾಯಿತು. ಸೊಲ್ಲಾಪುರದಲ್ಲಿ ಸಮಾವೇಶವನ್ನು ಆಯೋಜಿಸಿದ್ದು ಕೇಂದ್ರ ಸಂಘದ ಪದಾಧಿಕಾರಿಗಳು ಹಾಜರಿದ್ದು ಒಗ್ಗೂಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ.
ಮುಂದಿನ ದಿನಗಳಲ್ಲಿ ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಜನಾಂಗದ ಸಂಘಟನೆಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಆಡಳಿತ ಕಛೇರಿಯ ಆಧುನೀಕರಣ
ಕಛೇರಿಗೆ ಕಂಪ್ಯೂಟರ್, ಪ್ರಿಂಟರ್ ಮತ್ತು ಪೀಠೋಪಕರಣಗಳನ್ನು ಅಳವಡಿಸಿ ಸಂಘದ ಮಾಹಿತಿಗಾಗಿ ವೆಬ್ ಸೈಟ್ ಸೌಲಭ್ಯವನ್ನು ಅಳವಡಿಸಲಾಗಿದೆ
ಮಾನ್ಯ ಮುಖ್ಯ ಮಂತ್ರಿಯವರು ಕೇಂದ್ರ ಸಂಘದ ಮನವಿಯ ಮೇರೆಗೆ ಸಂಘಕ್ಕೆ ಬೆಂಗಳೂರಿನಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಸುಮಾರು 5 ಎಕರೆ ಜಾಗವನ್ನು ಮಂಜೂರು ಮಾಡಲು ಆದೇಶಿಸಿರುತ್ತಾರೆ. ಈ ಸಂಬಂಧದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸಂಪರ್ಕಿಸಿ ಜಾಗ ಪಡೆದುಕೊಳ್ಳಲು ಪ್ರಯತ್ನಸಲಾಗುತ್ತಿದೆ.
ವಿದ್ಯಾರ್ಥಿನಿಲಯದ ನವೀಕರಣಕ್ಕಾಗಿ ಕೇಂದ್ರ ಸರ್ಕಾರದ ರಸಗೊಬ್ಬರ ಮತ್ತು ರಾಸಾಯನಿಕ ಸಚಿವರಾದ ಶ್ರೀಯುತ ಅನಂತ್ ಕುಮಾರ್ ರವರರು ತಮ್ಮ ನಿಧಿಯಿಂದ 25 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದಾರೆ.