ಉಪಾಧ್ಯಕ್ಷರು ನುಡಿ


ಶ್ರೀ ಜಿ . ಸೋಮಶೇಖರ್

ಉಪಾಧ್ಯಕ್ಷರು, ಕುರುಹಿನಶೆಟ್ಟಿ ಕೇಂದ್ರ ಸಂಘ (ರಿ)

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಪ್ರಗತಿ ಸಾಧಿಸಲು ಸಮಾಜದ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ, ಪೂರಕ ಸೌಲಭ್ಯಗಳನ್ನು ಒದಗಿಸಿ ಕೊಡಲು ಹಿಂದಿನ ಅಧ್ಯಕ್ಷರಾದ ದಿ|| ಕೆ. ವೈರಮುಡಿ ಅವರ ನೇ್ತೃತ್ವದಲ್ಲಿ ಹಾಲಿ ಸಂಘದ ಅಧ್ಯಕ್ಷರಾದ ಶ್ರೀ ಈಶ್ವರಪ್ಪನವರ ಸಹಕಾರದೊಂದಿಗೆ ಕೇಂದ್ರ ಸಂಘವು 2008ರ ಆಗಸ್ಟನಲ್ಲಿ ಒಂದು ಶಾಶ್ವತ ದತ್ತಿ ನಿಧಿಯನ್ನು "ಕೆಎಸ್ ಕೆ ಎಸ್ ಜ್ಞಾನದಾಸೋಹ ನಿಧಿ" ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ಈ ನಿಧಿಯು ಕೇಂದ್ರ ಸಂಘದ ಶಾಶ್ವತ ದತ್ತಿ ನಿಧಿಯಾಗಿದ್ದು, ನಿಧಿಗೆ ಸಮಾಜದ ಹಾಗೂ ಇತರೆ ದಾನಿಗಳಿಂದ ದಾನದ ರೂಪದಲ್ಲಿ ದೇಣಿಗೆಯನ್ನು ಸಂಗ್ರಹಿಸಲಾಗಿದೆ. ಈ ದೇಣಿಗೆ ಸಂಗ್ರಹಿಸಲಾಗಿರುವ ಮೊತ್ತ ಇವತ್ತಿವರೆವಿಗೆ 90 ಲಕ್ಷಗಳಾಗಿದೆ. ಇದನ್ನು ಒಂದು ಕೋಟಿ ರೂಗಳಿಗೂ ಮೀರಿ ಸಂಗ್ರಹಿಸುವ ಗುರಿಯನ್ನು ಹೊಂದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ನಿಧಿಯ ಅಡಿಯಲ್ಲಿ ಶೇಖರಿಸಲಾಗಿರುವ ಎಲ್ಲಾ ದೇಣಿಗೆಯ ಮೊತ್ತವನ್ನು ನಿಶ್ಚಿತ ಠೇವಣಿಯಲ್ಲಿ ಇಡಲಾಗಿದ್ದು, ಗಳಿಸುವ ಬಡ್ಡಿ ಮೊತ್ತವನ್ನು ಮಾತ್ರ ಸಮಾಜದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆ ಬಳಸಲಾಗುತ್ತಿದೆ.

ಇಲ್ಲಿಯವರೆಗೆ ಪ್ರೋತ್ಸಾಹ ದನವನ್ನು ಅಂಚೆ ಮೂಲಕ ಕೂಡುವ ಪದ್ದತಿ ಇದ್ದು. ಈಗ ನಾವುಗಳು ತಾಲ್ಲೂಕು ಮಟ್ಟಕ್ಕೆ ಹೋಗಿ ಪ್ರತಿಭಾಪುರಸ್ಕಾರ ಮತ್ತು ಪ್ರೋತ್ಸಾಹ ದನವನ್ನು ವಿತರಿಸುತ್ತಿದ್ದೇವೆ.

ಎಲ್ .ಕೆ.ಜಿ. / ಯು.ಕೆ.ಜಿ. 1ನೇತರಗತಿ (ಆಂಗ್ಲ ಮಾಧ್ಯಮ ) ದಲ್ಲಿ ಓದುತ್ತಿರುವ ಸಮಾಜದ ಆರ್ಥಿಕವಾಗಿ ಹಿಂದುಳಿದ ಪೋಷಕರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಪ್ರೊವೇಶನಲ್ ಕೋರ್ಸ್ ಗಳಲ್ಲಿ ಓದುತ್ತಿರುವ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಸದ್ಯದಲ್ಲೇ ಪ್ರಾರಂಭಿಸಲಾಗುತ್ತದೆ.

" ಕುರುಹಿನಶೆಟ್ಟಿ ಸಮಾಜವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಲು ನಮ್ಮೊಡನೆ ಕೈಜೋಡಿಸ ಬನ್ನಿ "